ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಫೆ.6ರಿಂದ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 18 , 2015
ಜನವರಿ 18, 2015

ಫೆ.6ರಿಂದ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ

ಹೊನ್ನಾವರ : ತಾಲೂಕಿನ ಗುಣವಂತೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಆಶ್ರಯದಲ್ಲಿ ಫೆ. 6 ರಿಂದ 10 ರ ವರೆಗೆ ಐದು ದಿನ ನಡೆಯವ ಆರನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಹೊಸ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿದ್ದು ದೇಶದ ನಾನಾ ಭಾಗಗಳಿಂದ 200 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು ಎಂದು ಮಂಡಳಿಯ ನಿರ್ದೇಶಕ ಹಾಗೂ ಉತ್ಸವದ ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲದ ಸಂಪೂರ್ಣ ಉತ್ಸವವನ್ನು ನಾಟ್ಯ ಗುರು ಮಾಯಾರಾವ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ. ಯಕ್ಷಗಾನ ಕ್ಷೇತ್ರಕ್ಕೆ ಒಳ್ಳೆಯ ಕಾರ್ಯ ಮಾಡಿದ್ದಾರೆ. ತನ್ನ ತಂದು ಶಂಭು ಹೆಗಡೆಯವರಿಗೆ ತನಗೆ ಮತ್ತು ಮಗನಿಗೆ ಅವರು ಗುರು ಆಗಿದ್ದಾರೆ ಎಂದರು. ತಮಿಳು ನಾಡಿನ ಭಾಗವತ ಮೇಳ ಉತ್ಸವದಲ್ಲಿ ಪ್ರದರ್ಶನ ನೀಡಲಿದೆ. ಭಾಗವತ ಮೇಳಕ್ಕೆ ಬಹು ಪ್ರಾಚೀನ ಇತಿಹಾಸವಿದೆ. ತನ್ನದೇ ಆದ ಕಟ್ಟಳೆಗಳಿವೆ. ಹಿಂದೆ ದೇವಸ್ಥಾನದ ಎದುರು ಮಾತ್ರ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು. ಅವರ ಯಕ್ಷಗಾನ ನೋಡಬೇಕೆಂದರೆ ಅಲ್ಲಿಯೇ ಹೋಗಿ ನೋಡಬೇಕಿತ್ತು. ಹೊರಗಡೆ ಪ್ರದರ್ಶನ ಕೊಡುತ್ತಿರಲಿಲ್ಲ. ಈಗ ಸ್ವಲ್ಪ ಮಟ್ಟಿಗೆ ಕಟ್ಟಳೆ ಸಡಿಲಿಸಿದ್ದಾರೆ. ಅಂತಾರಾಷ್ಟ್ರೀಯ ಮನ್ನಣೆ ಪಡೆದ ಮೇಳವಿದು ಎಂದು ತಿಳಿಸಿದರು.

ಆಂಧ್ರದ ಕೂಚಿಪುಡಿ ಯಕ್ಷಗಾನ ಮೇಳ ಪ್ರದರ್ಶನ ನೀಡಲಿದೆ. ಆಂಧ್ರದಲ್ಲಿ ಇತ್ತೀಚೆಗೆ ಸಮೂಹ ಕಲಾವಿದರ ಕಲಾಪ್ರದರ್ಶನ ವಿರಳವಾಗಿದೆ ಇದಕ್ಕೆ ಜೀವಂತ ಉದಾಹರಣೆ ಏಕ ವ್ಯಕ್ತಿ ಪ್ರದರ್ಶನದ ಕೂಚಿಪುಡಿ ಯಕ್ಷಗಾನ. ಮೇಳಗಳ ಯಕ್ಷಗಾನ ಪ್ರದರ್ಶನ ಕಡಿಮೆಯಾಗಿ ಏಕ ವ್ಯಕ್ತಿ ಯಕ್ಷಗಾನದತ್ತ ಸಾಗಿದೆ. ಸಮೂಹ ಯಕ್ಷಗಾನ ಅಲ್ಲಿ ನಾಶವಾಗಿದೆ. ಏಕ ವ್ಯಕ್ತಿ ಪ್ರದರ್ಶನದಿಂದ ಸಮೂಹ ಕಲಾವಿದರ ಪ್ರದರ್ಶನಕ್ಕೆ ಸೆಳೆಯುವ ಪ್ರಯತ್ನ ಇದರಲ್ಲಿದೆ ಎಂದರು. ಕೇರಳದ ಕೂಡಿಯಾಟ್ಟಂ ಪ್ರದರ್ಶನ ನೀಡುವ ತಂಡ ಪ್ರಥಮಬಾರಿಗೆ ಉತ್ತರ ಕನ್ನಡಕ್ಕೆ ಬರುತ್ತಿದ್ದಾರೆ. ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಪರಿಚಯ ಮಾಡಿಸಲು ಅನುಕೂಲವಾಗುವಂತೆ ನಾಟಕ ಭರತನಾಟ್ಯ ಪ್ರದರ್ಶನಗಳನ್ನು ಸಹ ಅಳವಡಿಸಲಾಗಿದೆ ಎಂದು ತಿಳಿಸಿದರು.

ಅಸ್ಸಾಂನ ಸತ್ರಿಯಾ ಶಾಸ್ತ್ರೀಯ ನತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ಇದು 8 ನೇ ಶಾಸ್ತ್ರೀಯ ನತ್ಯದ ಮನ್ನಣೆ ಪಡೆದಿದೆ. ಇಡಗುಂಜಿ ಮೇಳ ಒಂದು ಗಂಟೆ ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನ ನೀಡಲಿದೆ. ಬೆಂಗಳೂರಿನ ಕಲಾವಿದೆ ಡಾ. ಸುಮಾ ಸುಧೀಂದ್ರ ಅವರಿಂದ ವೀಣಾವಾದನ, ವೆಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿಯವರಿಂದ ಕೂಚಿಪುಡಿ ನತ್ಯ, ಮಧ್ಯಪ್ರದೇಶದ ಕಬೀರ ಗಾಯನ ನಡೆಯಲಿದೆ . ಹಿರಿಯ ಹಾಗೂ ಶ್ರೇಷ್ಠ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಥಮಬಾರಿಗೆ ಇಡಗುಂಜಿ ಮೇಳದಲ್ಲಿ ಪಾತ್ರ ವಹಿಸುವರು. ಉತ್ಸವದಲ್ಲಿ ಬೇರೆ ಬೇರೆ ತಜ್ಞರು ಭಾಗವಹಿಸುವರು ಎಂದು ತಿಳಿಸಿದರು.

ಉತ್ಸವದಲ್ಲಿ ಸಂವಾದ, ವಿಚಾರ ಗೋಷ್ಠಿ, ಪ್ರಾತ್ಯಕ್ಷಿಕೆ, ಯಕ್ಷಗಾನ, ನಾಟಕ, ಪತ್ರಿಕೋದ್ಯಮ, ಹೀಗೆ ಬೇರೆ ಬೇರೆ ಕ್ಷೇತ್ರದವರಿಗೆ ಸನ್ಮಾನ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮಾತನಾಡಿ ಯಕ್ಷಗಾನ ಮಾತ್ರವಲ್ಲದೇ ಬೇರೆ ಬೇರೆ ರಂಗಕಲಾವಿದರ, ಸಮಾನ ಮನಸ್ಕರ ವೇದಿಕೆ ಆಗಬೇಕು. ಕಲಾ ಪ್ರಕಾರಗಳನ್ನು ವಿಸ್ತಾರ ಮಾಡುವ, ಕಲಿಯುವ ಕಲಿಸುವ ವೇದಿಕೆ ಆಗಬೇಕು ಎಂನುದು ಉತ್ಸವದ ಉದ್ದೇಶ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಹೆಗಡೆ ಅಪ್ಸರಕೊಂಡ ಉಪಸ್ಥಿತರಿದ್ದರು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ